
ನಗರದ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ 23 ವರ್ಷದ ಗ್ಲೋರಿಯ ರೋಡ್ರಿಗಸ್ ಅವರು, ಮೆಟ್ಟಲಿನಲ್ಲಿ ಅಪಘಾತವಾಗಿ ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ನಗರದ ಅಲೋಶಿಯಸ್ ಪದವಿ ಕಾಲೇಜಿನಲ್ಲಿ 23 ವರ್ಷದ ಯುವ ಉಪನ್ಯಾಸಕಿ ಗ್ಲೋರಿಯ ಆಶಾ ರೋಡ್ರಿಗಸ್ ಅವರು, ಮೆಟ್ಟಿಲಿನಲ್ಲಿ ಅಪಘಾತವಾಗಿ ಬಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬಜ್ಪೆ ಪಡು ಪೆರಾರ ನಿವಾಸಿಗಳಾದ ಗ್ರೇಶನ್ ಅಲೆಕ್ಸ್ ರೋಡ್ರಿಗಸ್ ಮತ್ತು ಗ್ರೆಟ್ಟಾ ಫ್ಲೇವಿಯಾ ದಂಪತಿಯ ಪುತ್ರಿಯಾದ ಗ್ಲೋರಿಯ, ಒಂದು ವರ್ಷದ ಹಿಂದಷ್ಟೇ ಅಲೋಶಿಯಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿ ಉಪನ್ಯಾಸಕಿಯಾಗಿದ್ದರು. ನವೆಂಬರ್ 9ರಂದು, ಕಾಲೇಜಿನ ಮೆಟ್ಟಿಲು ಇಳಿಯುವಾಗ ತಲೆ ಸುತ್ತಿ ಬಿದ್ದು ತಲೆಗೆ ಪೆಟ್ಟಾದರು. ತಕ್ಷಣವೇ ಅವರನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಕೋಮಾ ಸ್ಥಿತಿಯಲ್ಲಿ ಇದ್ದ ಗ್ಲೋರಿಯಾ ನವೆಂಬರ್ 13ರಂದು ಚಿಕಿತ್ಸೆಗೆ ಸ್ಪಂದಿಸದೆ ವಿಧಿವಶರಾದರು. ಈ ನಡುವೆ, ನವೆಂಬರ್ 11ರಂದು ಅಲೋಶಿಯಸ್ ಚಾಪೆಲ್‌ನಲ್ಲಿ ಗ್ಲೋರಿಯ ಚೇತರಿಕೆಗಾಗಿ ಸಾಮೂಹಿಕ ಪ್ರಾರ್ಥನೆ ಆಯೋಜಿಸಲಾಗಿತ್ತು. ಅವರ ಅಂತ್ಯಕ್ರಿಯೆ ನವೆಂಬರ್ 14ರಂದು ಮಧ್ಯಾಹ್ನ ಬಜ್ಪೆಯ ಸೈಂಟ್ ಜೋಸೆಫ್ ಚರ್ಚಿನಲ್ಲಿ ನಡೆಯಲಿದೆ. ಗ್ಲೋರಿಯಾ ಬಿಕಾಂ ಪದವಿಯಲ್ಲಿ ಕಾಮರ್ಸ್ ಉಪನ್ಯಾಸಕಿಯಾಗಿದ್ದರು.
ಅಲರ್ಜಿ ಕಾಯಿಲೆಯಿಂದ ಮೃತಪಟ್ಟ ವ್ಯಕ್ತಿಯ ಅಂಗಾಂಗಗಳು ಐದು ಮಂದಿ ಆರೋಗ್ಯಲಾಭಕ್ಕಾಗಿ ದಾನ ಮಾಡಲಾಯಿತು.

ಮೃತ ಉಪನ್ಯಾಸಕಿ ಗ್ಲೋರಿಯಾ ರೋಡ್ರಿಗಸ್ ಅವರ ಅಂಗಾಂಗಗಳು ಐದು ಜನರಿಗೆ ದಾನ ಮಾಡಲಾಗಿದೆ ಎಂದು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಗ್ಲೋರಿಯಾ ಅವರಿಗೆ anaphylactic reaction ಸಮಸ್ಯೆ ಉಂಟಾಗಿ, ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಬಗ್ಗೆ ವೈದ್ಯರ ತಂಡವು ನವೆಂಬರ್ 11ರಂದು ಸಂಜೆ 4 ಗಂಟೆಗೆ ಅಧಿಕೃತ ಘೋಷಣೆ ಮಾಡಿತ್ತು. ಆಕೆಯ ಕುಟುಂಬ ಸದಸ್ಯರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದು, ಲಿವರ್ ಅನ್ನು ಎಜೆ ಆಸ್ಪತ್ರೆಗೆ, ಶ್ವಾಸಕೋಶವನ್ನು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ, ಹೃದಯವನ್ನು ನಾರಾಯಣ ಹೃದಯಾಲಯಕ್ಕೆ, ಕಿಡ್ನಿಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ, ಮತ್ತು ಚರ್ಮ ಹಾಗೂ ಕಣ್ನಿನ ಕೊರ್‌ನಿಯಾವನ್ನು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉಳಿಸಲಾಗಿದೆ. Anaphylactic reaction ಎನ್ನುವುದು ಗಂಭೀರ ಅಲರ್ಜಿ ಸಮಸ್ಯೆಯಾಗಿದ್ದು, ಇದರ ಪರಿಣಾಮವಾಗಿ ಬಹು ಅಂಗಾಂಗ ವೈಫಲ್ಯ ಉಂಟಾಗುತ್ತದೆ. ಗ್ಲೋರಿಯಾ ಅವರು ಯಾವುದೋ ಆಹಾರ ಸೇವನೆ ಮಾಡಿದ ನಂತರ ಈ ರೀತಿಯ ಅಲರ್ಜಿ ಪ್ರತಿಕ್ರಿಯೆ ಉಂಟಾಗಿ ಈ ಸ್ಥಿತಿಗೆ ತಲುಪಿದ್ದರು ಎಂದು ವೈದ್ಯರು ವಿವರಿಸಿದ್ದಾರೆ.