
“ಆಮಿ ಆನಿ ಆಮ್ಚಿಂ” ಸಂಸ್ಥೆಯ ವತಿಯಿಂದ, ಈ ನವೆಂಬರ್ 9 ಮತ್ತು 10 ರಂದು ಮಂಗಳೂರು ಜಿಲ್ಲೆಯ ಕೆಲರಾಯ್ ಚರ್ಚ್ ವಠಾರದಲ್ಲಿ ಕರಾವಳಿಯ ಅತ್ಯಂತ ದೊಡ್ಡ ಬ್ರಾಸ್ ಬ್ಯಾಂಡ್ ಹಬ್ಬದ ಗ್ರ್ಯಾಂಡ್ ಫಿನಾಲೆ “ಪೆಪೆರೆ ಪೆಪೆ ಢುಂ” ಏರ್ಪಡಿಸಲಾಗಿದೆ. ಮೊದಲನೆಯ ದಿನ, ನವೆಂಬರ್ 9 ಶನಿವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಆರಂಭವಾಗಿದ್ದು, 5 ತಂಡಗಳು ಅಂತಿಮ ಹಂತದ ರೋಚಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಬ್ರಾಸ್ ಬ್ಯಾಂಡ್ ವಾದನೆಯಲ್ಲಿ ನವೀನ ಪ್ರಯೋಗಗಳ ಅನಾವರಣಕ್ಕೆ ವೇದಿಕೆಯಾಗಲಿದೆ.


ಎರಡನೇ ದಿನ, ನವೆಂಬರ್ 10 ಭಾನುವಾರ ಸಂಜೆ 5 ಗಂಟೆಗೆ, ವಿದೇಶಗಳಲ್ಲಿ ಕನ್ನಡ ಭಾಷೆಯ ಪ್ರಸಾರದಲ್ಲಿ ಮಹತ್ವಪೂರ್ಣ ಸಾಧನೆ ಮಾಡಿದ ಡಾ. ರೊನಾಲ್ಡ್ ಕೊಲಾಸೊ ಅವರ ಹೆಸರಿನಲ್ಲಿ “ಡಾ. ರೊನಾಲ್ಡ್ ಕೊಲಾಸೊ ಸಾಮರಸ್ಯ ಪ್ರಶಸ್ತಿ-24” ಪ್ರದಾನ ಕಾರ್ಯಕ್ರಮವು ಆಯೋಜಿಸಲಾಗಿದೆ.

ಆಯೋಜನೆಯ ವೈಶಿಷ್ಟ್ಯಗಳು:
ಕಾರ್ಯಕ್ರಮದ ಸ್ಥಳದಲ್ಲಿ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಳಿಗೆಗಳ ಜೊತೆಗೆ ಮನರಂಜನೆ ಚಟುವಟಿಕೆಗಳು ಮತ್ತು ಸ್ಪರ್ಧೆಗಳು ಇರುತ್ತವೆ. ಪ್ರವೇಶ ಉಚಿತ.
